Skip to main content
ಸುದ್ದಿ ಸದ್ದು

*ಮಂಗಳೂರು ರೈಲ್ವೆ ಜಾಲ ಮೈಸೂರು ವಿಭಾಗಕ್ಕೆ ವರ್ಗ ಕೇರಳ ರಾಜ್ಯದ ವಿರೋಧಕ್ಕೆ ಖಂಡನೆ*

*ಮಂಗಳೂರು ರೈಲ್ವೆ ಜಾಲ ಮೈಸೂರು ವಿಭಾಗಕ್ಕೆ ವರ್ಗ ಕೇರಳ ರಾಜ್ಯದ ವಿರೋಧಕ್ಕೆ ಖಂಡನೆ* image

*ಮಂಗಳೂರು ರೈಲ್ವೆ ಜಾಲ ಮೈಸೂರು ವಿಭಾಗಕ್ಕೆ ವರ್ಗ ಕೇರಳ ರಾಜ್ಯದ ವಿರೋಧಕ್ಕೆ ಖಂಡನೆ*



ಮಂಗಳೂರು- ಮಂಗಳೂರು ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಕೇರಳಂ ಸರ್ಕಾರ, ಮತ್ತು ಅಲ್ಲಿನ ವಿರೋಧ ಪಕ್ಷಗಳು ವಿರೋಧಿಸಿರುವುದು ಕರ್ನಾಟಕದ ವಿಚಾರದಲ್ಲಿ ನೇರ ಹಸ್ತಕ್ಷೇಪವಾಗಿದೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಮತ್ತು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ತಿಳಿಸಿದ್ದಾರೆ. ಭಾಷಾವಾರು ರಾಜ್ಯಗಳ ವ್ಯವಸ್ಥೆಯನ್ನು ಅಸ್ಥಿರ ಗೊಳಿಸುವ ಕೇರಳಂ ಮುಖ್ಯಮಂತ್ರಿಯ ನಿಲುವನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಕೇರಳಂ ರಾಜ್ಯ ಸರ್ಕಾರಕ್ಕೆ ಎಚ್ಚರಿಸುವಂತೆ ಕೋರಬೇಕು ಎಂದು ಹೇಳಿದ್ದಾರೆ.



ಕೇರಳ ಸರ್ಕಾರ ಮತ್ತು ಅಲ್ಲಿನ ರಾಜಕೀಯ ನಾಯಕರು ಪಕ್ಷ ಬೇದ ಮರೆತು ಈ ರೈಲ್ವೆ ಮಂಡಳಿಯ ನಿರ್ಧಾರವನ್ನು ಕಟುವಾಗಿ ಟೀಕಿಸಲು ಕಾರಣ ಮಂಗಳೂರು ರೈಲ್ವೆ ವಲಯ ಮತ್ತು ಪಣಂಬೂರು ಗೂಡ್ಸ್ ಯಾರ್ಡಗಳು ಒಟ್ಟು ಸರಕು ಸಾಗಣೆ ಆದಾಯದ ಶೇ. ೯೦ ಕ್ಕಿಂತ ಹೆಚ್ಚು ಮತ್ತು ಒಟ್ಟು ಆದಾಯದ ಸುಮಾರು ಶೇ. ೫೦ ರಿಂದ ೬೦ ರಷ್ಟು ಆದಾಯ ಮಂಗಳೂರು ಭಾಗದಿಂದಲೇ ಬರುತ್ತಿರುವುದು.

ನಮ್ಮ ರಾಜ್ಯದ ರಾಜಕೀಯ ನಾಯಕರೂ ಪಕ್ಷ ಬೇದ ಮರೆತು ಕೇರಳಂ ಸರಕಾರದ ನಿಲುವನ್ನು ಖಂಡಿಸಬೇಕೆಂದು ರಾಜ್ಯದ ರಾಜಕಿಯ ನಾಯಕರಿಗೆ ಮನವಿ ಮಾಡಿದ್ದಾರೆ.


ಮಂಗಳೂರು ರೈಲು ನಿಲ್ದಾಣದಲ್ಲಿ ಮಲಯಾಳಂ ವಿಜೃಂಬಿಸುತ್ತಿದೆ. ಕಚೇರಿಗಳಿಂದ ಹಿಡಿದು ಕ್ಯಾಂಟೀನ್ ಗಳಲ್ಲಿ ಮಲಯಾಳಂ ಪ್ರಾಬಲ್ಯ ಎದ್ದು ಕಾಣುತ್ತದೆ. ಇದು ಹೋಗಿ ಕನ್ನಡಕ್ಕೆ ಆದ್ಯತೆ ಸಿಗಬೇಕು. ಸ್ಥಳಿಯ ಕನ್ನಡಿಗರಿಗೆ ಉದ್ಯೋಗ ಮತ್ತು ಗುತ್ತಿಗೆ ಸಿಗಬೇಕು. ಕನ್ನಡಿಗರ ದಶಕಗಳ ಈ ಹಕ್ಕೊತ್ತಾಯವನ್ನು ಆಗು ಮಾಡಿರುವ ನಮ್ಮ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರನ್ನು ನಾವು ಅಭಿನಂದಿಸುತ್ತೇವೆ. ಮತ್ತು ಕೇರಳಂನ ಅಭಿಪ್ರಾಯ ಏನೇ ಇರಲಿ ಮಂಗಳೂರು ವಿಭಾಗವನ್ನು ಆದಷ್ಟು ತುರ್ತಾಗಿ ಮೈಸೂರಿಗೆ ವರ್ಗಾಯಿಸ ಬೇಕೆಂದು ಮನವಿ ಮಾಡುತ್ತೇವೆ.

Comments